rtgh

ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 16ನೇ ಕಂತಿನ ಹಣಕ್ಕೆ ಈ ಪ್ರಕ್ರಿಯೆ ಕಡ್ಡಾಯವಾಗಿದೆ

ನಮಸ್ಕಾರ ಸ್ನೇಹಿತರೆ ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆಯನ್ನು ಕೃಷಿ ಇಲಾಖೆಯಿಂದ ಕೇಂದ್ರ ಸರ್ಕಾರವು 2019ರಲ್ಲಿ ಜಾರಿಗೊಳಿಸಿರುತ್ತದೆ. ಮುಂದುವರೆದಂತೆ ಈ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳಾದ ರೈತರು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನೀಡಿದಂತಹ ದಾಖಲೆಗಳನ್ನು ಇತ್ತೀಚಿಗೆ ಬದಲಾವಣೆ ಏನಾದರೂ ಮಾಡಿದರೆ ಈಕೆ ವೈಸಿ ಮಾಡುವುದು ಕಡ್ಡಾಯವಾಗಿದೆ. ಹೀಗೆ ಇಕೇವೈಸಿ ಮಾಡಿಸದೆ ಇದ್ದರೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಅಡಿಯಲ್ಲಿ ಹಣ ಬರುವುದು ರದ್ದಾಗುತ್ತದೆ ಎಂದು ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಿದ್ದಾರೆ.

Pradhan Mantri Kisan Yojana
Pradhan Mantri Kisan Yojana

ಈ ಕೆ ವೈ ಸಿ ಪ್ರಕ್ರಿಯೆ ಕಡ್ಡಾಯ :

ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಆಗದೆ ಇದ್ದರೂ ಕೂಡ ಕೆವೈಸಿ ಮಾಡಿಸಬಹುದಾಗಿದೆ ಈ ಕೆವೈಸಿ ಪ್ರಕ್ರಿಯೆ ಕಡ್ಡಾಯವಾಗಿದ್ದರೆ ಮಾತ್ರ ಮುಂದಿನ ಕಂತುಗಳಲ್ಲಿ ಈ ಯೋಜನೆಯ ಹಣ ಜಮಾ ಆಗುತ್ತದೆ. ರೈತರನ್ನು ಸಬಲೀಕರಣ ಗೊಳಿಸುವ ಯೋಜನೆ ಪ್ರಧಾನ ಮಂತ್ರಿ ಕಿಸಾನ್ ನಿಧಿಯಾಗಿದ್ದು ಹಣಕಾಸಿನ ನೆರವನ್ನು ಈ ಯೋಜನೆಯ ಮೂಲಕ ಪಡೆಯಬಹುದಾಗಿದೆ.

ಈಗಾಗಲೇ ಈ ಯೋಜನೆ ಅಡಿಯಲ್ಲಿ ನವೆಂಬರ್ 15 2018 ರಂದು 15ನೇ ಕಂತು ಬಿಡುಗಡೆಯಾಗಿದ್ದು ಇದೀಗ ರೈತರು 16ನೇ ಕಂತಿಗಾಗಿ ಕಾಯುತ್ತಿದ್ದಾರೆ. ಈಕೆವೈಸಿ ಮಾಡಿದ ರೈತರಿಗೆ ಮಾತ್ರ 16ನೇ ಕಂತಿನ ಹಣ ಲಭ್ಯವಿರುತ್ತಿದ್ದು ಫೆಬ್ರವರಿ 15 2018 ಈಕೆ ವೈಸ್ಯೆಯನ್ನು ಮಾಡಿಸಲು ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ. ಸಮಯಕ್ಕೆ ಸರಿಯಾಗಿ ಈ ಕೆ ವೈ ಸಿ ಯನ್ನು ಮಾಡಿಸಿದರೆ ಮಾತ್ರ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದಾಗಿದೆ.

ಇದನ್ನು ಓದಿ : 4.5 ಲಕ್ಷ ಬೆಲೆಬಾಳುವ ಕುರಿ : ಈ ಕುರಿಗೆ ಇಷ್ಟೊಂದು ಹಣ ಏಕೆ? ಇದನ್ನು ಹೇಗೆ ಸಾಕುವುದು ?

ಈಕೆ ವೈಸಿಯನ್ನೂ ಎಲ್ಲಿ ಮಾಡಿಸಬೇಕು :

ಈ ಕೆ ವೈ ಸಿ ಮಾಡಿಸದೆ ಇರುವ ರೈತರು ಉತ್ತರ ಕನ್ನಡ ಜಿಲ್ಲೆಯ ಬರುವ ಎಲ್ಲಾ ತಾಲೂಕುಗಳ ಸಂಬಂಧಪಟ್ಟಂತೆ ಕೃಷಿ ಇಲಾಖೆಯ ರೈತಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಥವಾ ಗ್ರಾಮ ಪಂಚಾಯಿತಿಗಳಲ್ಲಿ ಭೇಟಿ ನೀಡಿ ಆಧಾರ್ ಕಾರ್ಡ್ ಹಾಗೂ ಮೊಬೈಲ್ ನಂಬರ್ ಜೋಡಣೆ ಮಾಡಿಸಬೇಕಾಗಿದೆ. ಇವುಗಳಲ್ಲದೆ ಹತ್ತಿರದ ಕೃಷಿ ಇಲಾಖೆಯ ಗ್ರಾಮವನ್ನು ಸಿ ಎಸ್ ಓ ಕರ್ನಾಟಕ ಒನ್ ಕರ್ನಾಟಕ ಒನ್ ಸೆಂಟರ್ ಕೇಂದ್ರಗಳಲ್ಲಿಯೂ ಸಹ ಮಾಡಿಸಬಹುದು.

ತಲೆ ಕೇಂದ್ರ ಸರ್ಕಾರದಿಂದ ಪ್ರಥಮ ಮಂತ್ರಿ ಕಿಸಾನ್ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ರೈತರು ಈಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಹಾಗಾಗಿ ಈ ಮಾಹಿತಿಯನ್ನು ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಶೇರ್ ಮಾಡುವ ಮೂಲಕ ಕೂಡಲೇ ಅವರು ಈಕೇವೈಸಿ ಮಾಡಿಸಿಕೊಳ್ಳುವಂತೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment