rtgh

ವಾಹನಗಳಿಗೆ ಇದೀಗ HSRP ನಂಬರ್ ಪ್ಲೇಟ್ ಕಡ್ಡಾಯವಾಗಿದೆ : ಆನ್ಲೈನ್ ಮೂಲಕ ಅಪ್ಲೈ ಮಾಡಿ

ನಮಸ್ಕಾರ ಸ್ನೇಹಿತರೆ ಇದೀಗ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ಗಳನ್ನು 2019 ಕ್ಕಿಂತ ಮುನ್ನ ನೋಂದಣಿ ಆಗಿರುವಂತಹ ಎಲ್ಲಾ ವಾಹನಗಳಿಗೆ ಅಳವಡಿಕೆ ಕುರಿತು ಈಗಾಗಲೇ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಹಲವು ಗಡವುಗಳನ್ನು ನೀಡಿ ದಿನಾಂಕವನ್ನು ವಿಸ್ತರಿಸಿದೆ. ಇದೀಗ ಫೆಬ್ರವರಿ 17ರವರೆಗೆ ನಂಬರ್ ಪ್ಲೇಟ್ ಅಳವಡಿಸಲು ಕೊನೆಯ ದಿನಾಂಕವನ್ನು ಕಲ್ಪಿಸಿದ್ದು ಆದರೂ ಸಹ ಕೊನೆ ಅವಧಿಯಲ್ಲಿ ಜನರು ಹೆಚ್ಚೆಚ್ಚು ರಿಜಿಸ್ಟರ್ ಮಾಡಲು ಮುಂದಾಗುತ್ತಿದ್ದಾರೆ ಅಲ್ಲದೆ ಅಪ್ಲೋಡ್ ಸಮಸ್ಯೆಯೂ ಕೂಡ ಇರಲಿಲ್ಲ ಇದೀಗ ಪುನಃ ದಿನಾಂಕ ವಿಸ್ತರಣೆಗೆ ಸಾರ್ವಜನಿಕರಿಂದ ಒತ್ತಡ ಕೇಳಿ ಬಂದಿದ್ದು ಈ ಬಗ್ಗೆ ಸದನದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ತಿಳಿಸಿದ್ದಾರೆ.

HSRP number plate is now mandatory for vehicles
HSRP number plate is now mandatory for vehicles

ಫೆಬ್ರವರಿ 17ರ ವರೆಗೆ ಅವಕಾಶ :

ಫೆಬ್ರವರಿ 17ರವರೆಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಮಾಡಿಸಲು ಅವಕಾಶ ಕಲ್ಪಿಸಿದ್ದು ಈ ಹಿಂದೆ ಒಂದು ಬಾರಿ ಮುಂದಕ್ಕೆ ಹಾಕಲಾಗಿತ್ತು ಇದೀಗ ಮತ್ತೆ ಮುಂದಕ್ಕೆ ಹಾಕಿ ಎಂದು ಸಾರ್ವಜನಿಕರಿಂದ ಒತ್ತಡ ಬರುತಿದೆ ಇನ್ನು ಒಂದು ವಾರದವರೆಗೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸಲು ಸಮಯವಿದೆ. ಎಲ್ಲರೂ ಈಗ ಕೊನೆಯಲ್ಲಿ ಅರ್ಜಿ ಹಾಕುವುದಕ್ಕೆ ಬರುತ್ತಿದ್ದಾರೆ ಇದರಿಂದ ಒತ್ತಡ ಹೆಚ್ಚಾಗಿ ಅಪ್ಲೋಡ್ ಆಗುವುದರಲ್ಲಿ ಸಮಸ್ಯೆ ಇದೆ ಇನ್ನು ಒಂದು ವಾರ ಸಮಯವಿದೆ ನೋಡೋಣ ಎಂದು ಸಾರ್ವಜನಿಕರಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾಹಿತಿ ನೀಡಿದರು.

ಇದನ್ನು ಓದಿ : ಇಂದಿನಿಂದ ಫೋನ್ ಪೇ ಮತ್ತು ಗೂಗಲ್ ಪೇ ಬಳಸುವವರಿಗೆ ಹೊಸ ನಿಯಮ !

HSRP ನಂಬರ್ ಪ್ಲೇಟ್ ಪಡೆಯುವ ವಿಧಾನ :

ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಕುರಿತು ಈಗಾಗಲೇ ಹಲವು ಗಡುಗುಗಳನ್ನು ನೀಡಿ ವಿಸ್ತರಿಸಿದೆ ಇದೀಗ ಫೆಬ್ರವರಿ ಕೊನೆಯ ದಿನಾಂಕವಾಗಿದೆ. ಅದಾದ ನಂತರ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ವಾಹನಗಳನ್ನು ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಕೆ ಮಾಡುವುದನ್ನು ತಪ್ಪಿಸಲು ನಕಲಿ ನಂಬರ್ ಪ್ಲೇಟ್ಗಳು ಹಾಗೂ ವಾಹನಗಳನ್ನು ಟ್ರ್ಯಾಕ್ ಮಾಡುವ ಉದ್ದೇಶದಿಂದ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಗತ್ಯವಾಗಿದ್ದು ಎಲ್ಲಿಂದರಲ್ಲಿ ಈ ನಂಬರ್ ಪ್ಲೇಟ್ ಸಿಗುವುದಿಲ್ಲ.

ಮಧ್ಯವರ್ತಿಗಳ ಅವಶ್ಯಕತೆ ಇಲ್ಲದೆ ಸುಲಭವಾಗಿ ಆನ್ಲೈನ್ ನಲ್ಲಿ ಬುಕ್ ಮಾಡಿ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅನ್ನು ಪಡೆಯಬಹುದಾಗಿದೆ. ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅನ್ನು ಪಡೆಯಬೇಕಾದರೆ ಕರ್ನಾಟಕದಲ್ಲಿ ವಾಹನ ಮಾಲೀಕರು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಬುಕ್ ಮಾಡಲು ಸಾರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ ಆದ https://transport.karnataka.gov.in ಅಥವಾ https://www.siam.in ಈ ವೆಬ್ ಸೈಟ್ ಗೆ ಭೇಟಿ ನೀಡಿ ಲಾಗಿನ್ ಆಗಿ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ಗೆ ಅರ್ಜಿ ಸಲ್ಲಿಸಬಹುದಾಗಿದೆ.

ರಾಜ್ಯದಲ್ಲಿ ವಾಹನಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ 2019 ಕ್ಕಿಂತ ಮುನ್ನ ನೋಂದಣಿ ಆಗಿರುವ ಎಲ್ಲಾ ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅನ್ನು ಅಳವಡಿಸಲು ತಿಳಿಸಲಾಗಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರ ವಾಹನಗಳಿಗೆ ಕೂಡ ಹೆಚ್ ಎಸ್ ಆರ್ ಪೀ ನಂಬರ್ ಪ್ಲೇಟ್ ಅಳವಡಿಸಲು ಫೆಬ್ರವರಿ 17 ಕೊನೆಯ ದಿನಾಂಕವಾಗಿದೆ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment