rtgh

ಮಹಿಳೆಯರಿಗೆ ಇದೀಗ ರೂ.10,000 ಹಣ : ಗೃಹಲಕ್ಷ್ಮಿ ಯೋಜನೆಯ ನೊಂದಣಿ ಆಗಿದೆರೆ !

ನಮಸ್ಕಾರ ಸ್ನೇಹಿತರೆ ಉಚಿತವಾಗಿ ಪ್ರತಿ ತಿಂಗಳು 2000ಗಳನ್ನು ನೀಡುವುದು ಎಂದರೆ ಸಣ್ಣ ವಿಚಾರವೇನು ಅಲ್ಲ ಏಕೆಂದರೆ ಮಹಿಳೆಯರು ಈಗಾಗಲೇ ಕರ್ನಾಟಕ ಸರ್ಕಾರದಿಂದ 10,000ಗಳನ್ನು ಉಚಿತವಾಗಿ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪಡೆಯುತ್ತಿದ್ದಾರೆ.

fifth-tranche-of-money-gruhalkshmi-yojana
fifth-tranche-of-money-gruhalkshmi-yojana

ಐದನೇ ಕಂತಿನ ಹಣ ಗೃಹಲಕ್ಷ್ಮಿ ಯೋಜನೆಯದ್ದು ಬಿಡುಗಡೆ :

ಹಲವು ಗೊಂದಲಗಳ ನಡುವೆ ಗೃಹಲಕ್ಷ್ಮಿ ಯೋಜನೆ, ಸಾಕಾರಗೊಂಡಿದೆ ಎಂದು ಹೇಳಬಹುದು ಪ್ರಾರಂಭದಲ್ಲಿ ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವ ಅಷ್ಟರಲ್ಲಿ ಸರ್ಕಾರವು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿತ್ತು ಆದರೆ ಇದೀಗ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಬಹುತೇಕ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗುತ್ತಿದೆ. ಇದೀಗ ಗೃಹಲಕ್ಷ್ಮಿ ಯೋಜನೆಯ 5ನೇ ಕಂತಿ ನ ಹಣವು ಕೂಡ ವರ್ಗಾವಣೆ ಆಗಿದೆ.

ಒಟ್ಟು ಹತ್ತು ಸಾವಿರ ಪಡೆದಿದ್ದಾರೆ ಮಹಿಳೆಯರು :

ಜನವರಿ ತಿಂಗಳಿನಲ್ಲಿಯೇ ಈಗ 5ನೇ ಕಾಂತಿನ ಹಣವು ಗೃಹಲಕ್ಷ್ಮಿ ಯೋಜನೆಯದ್ದು ವರ್ಗಾವಣೆಯಾಗಿದೆ ಒಟ್ಟಾರೆ ನಾಲ್ಕು ಮತ್ತು 5ನೇ ಕಂತಿನ ಹಣ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಒಂದೇ ತಿಂಗಳಿನಲ್ಲಿ ಮಹಿಳೆಯರ ಕೈ ಸೇರಿದೆ. ಇದುವರೆಗೂ ಗೃಹಲಕ್ಷ್ಮಿ ಯೋಜನೆಯ ಹಣ ಬರದೆ ಇರುವವರೆಗೂ ಕೂಡ ಕೆವೈಸಿ ಸರಿಪಡಿಸಿಕೊಂಡ ನಂತರ ಗೃಹಲಕ್ಷ್ಮಿ ಯೋಜನೆಯ 5ನೇ ಕಾಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ. ಅದರಂತೆ ಈಗ ಆರನೇ ಕಂತಿನ ಹಣವನ್ನು ಕೂಡ ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ಬಿಡುಗಡೆಯಾಗಬಹುದು ಎಂಬ ಮಾಹಿತಿಗಳು ಕೇಳಿ ಬರುತ್ತಿದೆ.

ಇದನ್ನು ಓದಿ : ಮಹಿಳೆಯರಿಗೆ ಸರ್ಕಾರದಿಂದ ಉಚಿತವಾಗಿ 10,000 ಸಿಗಲಿದೆ : ಕೂಡಲೇ ಅರ್ಜಿ ಸಲ್ಲಿಸಿ

ಡಿ ಬಿ ಡಿ ಸ್ಟೇಟಸ್ ಚೆಕ್ ಮಾಡಿ :

ಇದುವರೆಗೂ ಗೃಹಲಕ್ಷ್ಮಿ ಯೋಜನೆಯ 5 ಕಂತಿನ ಹಣ ಬಿಡುಗಡೆಯಾಗಿದ್ದು 10,000ಗಳನ್ನು ಮಹಿಳೆಯರು ಪಡೆದುಕೊಂಡಿದ್ದಾರೆ ಅಲ್ಲದೆ ಇದೀಗ ಖಾತೆಗೆ ಹಣ ಬಂದಿದೆಯೇ ಇಲ್ಲವೇ ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಮಾಹಿತಿ ಕಣಜ ವೆಬ್ಸೈಟ್ಗೆ ಭೇಟಿ ನೀಡಬಹುದು ಅಥವಾ ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವಂತಹ ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಗಳಲ್ಲಿಯೂ ಕೂಡ ಹಣ ವರ್ಗಾವಣೆಯಾಗಿರುವುದರ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

ಒಟ್ಟಾರೆ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ರಾಜ್ಯದ ಮಹಿಳೆಯರು ಈಗಾಗಲೇ 10,000ಗಳನ್ನು ಉಚಿತವಾಗಿ ಸರ್ಕಾರದಿಂದ ಪಡೆದುಕೊಂಡಿದ್ದು ಇದೊಂದು ರೀತಿಯಲ್ಲಿ ರಾಜ್ಯದ ಮಹಿಳೆಯರಿಗೆ ಆರ್ಥಿಕ ಪರಿಸ್ಥಿತಿಯನ್ನು ಪ್ರತಿ ತಿಂಗಳೂ ನಿಭಾಯಿಸಲು ಸುಲಭವಾಗಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರಿಗೆ ಎಷ್ಟು ತಿಂಗಳ ಹಣ ವರ್ಗಾವಣೆಯಾಗಿದೆ ಎಂಬುದರ ಬಗ್ಗೆ ತಿಳಿದುಕೊಳ್ಳಲಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment