rtgh

ಸರ್ಕಾರದಿಂದ ಬರ ಪರಿಹಾರದ ಹಣ ಜಮಾ ಆಗಿದೆಯಾ : ಬಂದಿಲ್ಲಾ ಅಂದರೆ ಹೀಗೆ ಮಾಡಿ

ನಮಸ್ಕಾರ ಸ್ನೇಹಿತರೆ ನಿಮ್ಮ ಖಾತೆಗೆ ಇದುವರೆಗೂ ಕೂಡ ಬರ ಪರಿಹಾರದ ಹಣ ಜಮಾ ಆಗಿಲ್ಲದಿದ್ದರೆ ಬರ ಪರಿಹಾರದ ಹಣ ಬರದೆ ಇರಲು ಯಾವ ಸಮಸ್ಯೆ ಇರಬಹುದು ಹಾಗು ಅದಕ್ಕೆ ಇರುವಂತಹ ಪರಿಹಾರ ಏನು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದಾಗಿದೆ.

Drought relief money deposited in Karnataka
Drought relief money deposited in Karnataka

ರಾಜ್ಯ ಸರ್ಕಾರದಿಂದ ಬರ ಪರಿಹಾರದ ಹಣ ಜಮ :

ಸಾವಿರ ರೂಪಾಯಿಗಳನ್ನು ರೈತರ ಬ್ಯಾಂಕ್ ಖಾತೆಗೆ ರಾಜ್ಯ ಸರ್ಕಾರವು ಮೊದಲ ಕಂತ್ತಿನಲ್ಲಿ ಬರ ಪರಿಹಾರದ ಹಣವಾಗಿ ನೀಡುತ್ತಿದ್ದು ನಿಮ್ಮ ಖಾತೆಗೆ ಇದುವರೆಗೂ ಕೂಡ ಬರ ಪರಿಹಾರದ ಹಣ ಜಮಾ ಆಗಿಲ್ಲದಿದ್ದರೆ ಯಾವ ಕೆಲಸ ಮಾಡಬೇಕು ಎಂಬುದನ್ನು ತಿಳಿಸಲಾಗುತ್ತಿದೆ. ಇದುವರೆಗೂ ಕೂಡ ನಿಮಗೆ ಬರ ಪರಿಹಾರದ ಹಣ ಜಮಾ ಆಗಿಲ್ಲದಿದ್ದರೆ ಅದಕ್ಕೆ ಮುಖ್ಯ ಕಾರಣ fid ನಿಮ್ಮ ಹೆಸರಿನಲ್ಲಿ ಇಲ್ಲದೆ ಇರುವುದು. ಹಾಗಾಗಿ ಎಫ್ ಐ ಡಿ ಯನ್ನು ನೀವು ತಕ್ಷಣವೇ ಮಾಡಿಸಬೇಕಾಗುತ್ತದೆ ಇದಕ್ಕೂ ಮೊದಲು ಗ್ರಾಮಲೆಕ್ಕಿಗರ ಕಡೆಯಿಂದ ಈ ಹಿಂದಿನ ದಿನಗಳಲ್ಲಿ ನೀವು ಎಫ್ ಐ ಡಿ ಮಾಡಿಸಿಲ್ಲ ಎಂದರ್ಥ.

ರೈತರು fid ಕ್ರಿಯೇಟ್ ಮಾಡಬೇಕು :

ಬರ ಪರಿಹಾರದ ಹಣ ಜಮಾ ಆಗಬೇಕಾದರೆ ನಿಮ್ಮ ಹೆಸರು ಸರ್ಕಾರವು ಬಿಡುಗಡೆ ಮಾಡಿರುವ ಬರ ಪರಿಹಾರದ ಪಟ್ಟಿಯಲ್ಲಿ ಇದ್ದರೆ ಕೂಡಲೇ ನೀವು ಕ್ರಿಯೇಟ್ ಮಾಡಿದರೆ ಮಾತ್ರ ಪರ ಪರಿಹಾರದ ಹಣ ಜಮಾ ಆಗುತ್ತದೆ ಇಲ್ಲದಿದ್ದರೆ ನಿಮ್ಮ ಖಾತೆಗೆ ಬರ ಪರಿಹಾರದ ಹಣ ವರ್ಗಾವಣೆಯಾಗುವುದಿಲ್ಲ ಹಾಗಾಗಿ ತಕ್ಷಣವೇ ನೀವು ಗ್ರಾಮದ ವ್ಯಾಪ್ತಿಯಲ್ಲಿ ಬರುವಂತಹ ಕಂದಾಯ ಇಲಾಖೆಗೆ ಭೇಟಿ ನೀಡಿ ಅಥವಾ ಗ್ರಾಮಲೆಕ್ಕಿಗರನ್ನು ಸಂಪರ್ಕಿಸುವುದರ ಮೂಲಕ ಎಫ್ ಐಡಿಯನ್ನು ಕ್ರಿಯೇಟ್ ಮಾಡಿಕೊಳ್ಳಬಹುದಾಗಿದೆ.

ಇದನ್ನು ಓದಿ : ಟೈಮ್ ಕ್ಯಾಪ್ಸುಲನ್ನು ಶ್ರೀರಾಮ ಮಂದಿರದ ಕೆಳಗೆ 2,000 ಅಡಿಯಲ್ಲಿ ಇಡಲಾಗುತ್ತದೆ : ವಿಶೇಷತೆ ಏನಿದೆ..?

ಬರ ಪರಿಹಾರದ ಹಣ ಪರಿಶೀಲಿಸಲು ಇರುವ ಅಧಿಕೃತ ಲಿಂಕ್ :

ರಾಜ್ಯ ಸರ್ಕಾರವು ಜನವರಿ 5ನೇ ತಾರೀಖಿನಂದು ಬರ ಪರಿಹಾರದ ಹಣವನ್ನು ರೈತರ ಖಾತೆಗೆ ಜಮಾ ಮಾಡಿತ್ತು ಅದನ್ನು ಪರಿಶೀಲಿಸಿಕೊಳ್ಳಬೇಕು ಎಂದು ಕಾಯುತ್ತಿದ್ದರೆ ನಿಮ್ಮ ಜಿಲ್ಲೆ ತಾಲೂಕು ಹಾಗೂ ಹೋಬಳಿಯನ್ನು ಸೆಲೆಕ್ಟ್ ಮಾಡಿಕೊಂಡು ನಿಮ್ಮ ಗ್ರಾಮದಲ್ಲಿರುವವರು ಎಲ್ಲರ ಹೆಸರನ್ನು ಪರಿಶೀಲಿಸಿಕೊಳ್ಳಬಹುದಾಗಿದೆ. ಅದರಂತೆ ಬರ ಪರಿಹಾರದ ಹಣವನ್ನು ಪರಿಶೀಲಿಸಿಕೊಳ್ಳಬೇಕಾದರೆ ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಸುಲಭವಾಗಿ ತಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದು. https://fruitspmk.karnataka.gov.in/MISReport/FarmerDeclarationReport.aspx ಈ ವೆಬ್ ಸೈಟ್ ಗೆ ಭೇಟಿ ನೀಡಿ ಬರ ಪರಿಹಾರದ ಹಣ ಜಮಾ ಆಗಿದೆಯೇ ಇಲ್ಲವೇ ಎಂಬುದನ್ನು ರೈತರು ತಕ್ಷಣವೇ ಪರಿಶೀಲಿಸಿಕೊಳ್ಳಬಹುದಾಗಿದೆ.

ಒಟ್ಟಾರೆಯಾಗಿ ರಾಜ್ಯ ಸರ್ಕಾರವು ಜನವರಿ 5ನೇ ತಾರೀಖಿನಂದು ಪರಿಹಾರದ ಹಣವನ್ನು ಬಿಡುಗಡೆ ಮಾಡಿದ್ದು ರೈತರು ತಮ್ಮ ಖಾತೆಗೆ ಹಣ ಬರದೆ ಇದ್ದರೆ ಕೂಡಲೇ ಎಫ್ ಐ ಡಿ ಸಂಖ್ಯೆಯನ್ನು ಕ್ರಿಯೇಟ್ ಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಹಾಗಾಗಿ ಎಲ್ಲ ರೈತರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರಿಗೆ ಬರ ಪರಿಹಾರದ ಹಣ ಬರದೆ ಇದ್ದರೆ ಕೂಡಲೇ ಅವರಿಗೆ ಕ್ರಿಯೇಟ್ ಮಾಡಿಕೊಳ್ಳುವಂತೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment