rtgh

ಉಚಿತ ಟೈಲರಿಂಗ್ ತರಬೇತಿಗೆ ಚಾಲನೆ : ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ !

ನಮಸ್ಕಾರ ಸ್ನೇಹಿತರ ತರಬೇತಿಗಳು ಆರ್ಥಿಕ ಸ್ವಾಗತ ನಿಗೆ ಇತ್ತೀಚಿನ ದಿನಗಳಲ್ಲಿ ಅಗತ್ಯವಾಗಿದ್ದು ಇದೀಗ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಮಾಜಿ ಶಾಸಕ ಹಾಗೂ ಬಿವಿವಿ ಸಂಘ ಕಾರ್ಯದಕ್ಷರಾದ ಡಾಕ್ಟರ್ ವೀರಣ್ಣ ಚರಂತಿ ಮಠ ತಿಳಿಸಿದ್ದಾರೆ. ನಗರದ ಪ್ರತಿಷ್ಠಿತ ಬಿವಿವಿ ಸಂಘದ ಜನ ಶಿಕ್ಷಾ ಸಂಸ್ಥೆ ಬಾಗಲಕೋಟೆ ಇವರ ಆಶ್ರಯದಲ್ಲಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಸೋಮವಾರ ಟೈಲರಿಂಗ್ ತರಬೇತಿಯನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಈ ಬಗ್ಗೆ ಮಾತನಾಡಿದ್ದಾರೆ.

Drive for free tailoring training
Drive for free tailoring training

18 ವಿವಿಧ ವೃತ್ತಿಗಳು :

18 ವಿವಿಧ ವೃತ್ತಿಗಳು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಬರಲಿದ್ದು ಮಹಿಳೆಯರು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಈ ಟೈಲರಿಂಗ್ ತರಬೇತಿಯನ್ನು ಪಡೆದು ಬೇರೆ ಬೇರೆ ಸೌಲಭ್ಯಗಳನ್ನು ಪಡೆದುಕೊಂಡು ಸ್ವಂತ ಉದ್ಯೋಗವನ್ನು ಪ್ರಾರಂಭಿಸಬಹುದಾಗಿದೆ ಇದರಿಂದ ತಮ್ಮ ಆದಾಯವನ್ನು ಹೆಚ್ಚಿಸಿಕೊಂಡು ಅನೇಕರಿಗೆ ಸ್ವಂತ ಉದ್ಯಮವನ್ನು ಪ್ರಾರಂಭಿಸಿ ಉದ್ಯೋಗವನ್ನು ನೀಡುವಂತಾಗಬಹುದು. ಈ ತರಬೇತಿಗಳು ಆರ್ಥಿಕ ಸ್ವಾವಲಂಬಿಗಳಾಗಲು ಅಗತ್ಯವಾಗಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ : ಇಂದಿನಿಂದ ಫೋನ್ ಪೇ ಮತ್ತು ಗೂಗಲ್ ಪೇ ಬಳಸುವವರಿಗೆ ಹೊಸ ನಿಯಮ !

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಚಾಲನೆ :

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಇದೀಗ ಟೈಲರಿಂಗ್ ತರಬೇತಿಯನ್ನು ನೀಡಲಾಗುತ್ತಿದ್ದು ಗೌರವ ಕಾರ್ಯದರ್ಶಿಗಳು ಹಾಗೂ ಜನ ಶಿಕ್ಷಣ ಸಂಸ್ಥೆಯ ಕಾರ್ಯಧ್ಯಕ್ಷರಾದ ಮಹೇಶ ಅಥಣಿ ರವರು ಈ ಕಾರ್ಯಕ್ರಮದ ಬಗ್ಗೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಅಲ್ಲದೆ ಈ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ಎಸ್ ಕೆ ಶಬಾದಿ ಎಸ್ ಆರ್ ಮನಹಳ್ಳಿ ವೀರಣ್ಣ ಕಿರಗಿ ಬಿ ಎಸ್ ಅಂಗಡಿ ಶರಣಬಸವ ಹುನ್ನಾರ ಟಿ ಎಂ ನಾಗರತ್ನ ವೇದಿಕೆ ಮೇಲೆ ಉಪಸ್ಥಿತರಿದ್ದರು. ಹೀಗೆ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಬಾಗಲಕೋಟೆಯಲ್ಲಿ ಉಚಿತ ಟೈಲರಿಂಗ್ ತರಬೇತಿಗೆ ಚಾಲನೆ ನೀಡಿದರು.

ಒಟ್ಟಾರೆ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಲ್ಲಿ 18 ವಿಧವೃತ್ತಿಗಳು ಬರಲಿದ್ದು ಇದರಲ್ಲಿ ಟೈಲರಿಂಗ್ ತರಬೇತಿಯು ಕೂಡ ಒಂದಾಗಿದೆ. ಈ ತರಬೇತಿಯನ್ನು ಪಡೆದು ಮಹಿಳೆಯರು ಸ್ವಂತ ಉದ್ಯಮವನ್ನು ಪ್ರಾರಂಭಿಸಿ ಆರ್ಥಿಕ ಸ್ವಾವಲಂಬಿಗಳಾಗಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.

ಅಧಿಕೃತ ಜಾಲತಾಣ : https://pmvishwakarma.gov.in/

ಇತರೆ ವಿಷಯಗಳು :

Leave a Comment