rtgh

ಬೆಳೆ ವಿಮೆ ಹಣ ಜಮಾ ಯಾವಾಗ .? ಕೂಡಲೇ ಈ ಮಾಹಿತಿ ತಿಳಿಯಿರಿ ಎಲ್ಲಾ ರೈತರು

ನಮಸ್ಕಾರ ಸ್ನೇಹಿತರೆ 2023ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಬೆಳೆ ಪರಿಹಾರಕ್ಕೆ ಸಾಕಷ್ಟು ರೈತರು ಅರ್ಜಿ ಸಲ್ಲಿಸಿದ್ದು ಅದರಂತೆ ಇದೀಗ 210ಕ್ಕೂ ಹೆಚ್ಚಿನ ತಾಲೂಕುಗಳನ್ನು ರಾಜ್ಯ ಸರ್ಕಾರವು ಕೂಡ ಬರಬೇಡಿ ರೈತರ ಖಾತೆಗೆ ಇಲ್ಲಿಯವರೆಗೂ ಯಾವುದೇ ರೀತಿಯ ಕಾರಣವಾದಂತ ಬೆಳೆ ವಿಮೆ ಹಣ ಜಮಾ ಆಗಿರುವುದಿಲ್ಲ. ಅದರಂತೆ ಇದೀಗ ರಾಜ್ಯ ಸರ್ಕಾರವು ರೈತರಿಗೆ ಸಿಹಿ ಸುದ್ದಿಯನ್ನು ನೀಡಿದ್ದು ಆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

crop-insurance-money-deposit-information
crop-insurance-money-deposit-information

12 ಲಕ್ಷ ರೈತರಿಗೆ ಹಣ ಪಾವತಿ :

ರೈತರ ಬ್ಯಾಂಕ್ ಖಾತೆಗೆ ಬೆಳೆ ವಿಮೆಯ ಹಣ ಯಾವಾಗ ಜಮಾ ಆಗುತ್ತದೆ ಎಂದು ಹಾಗೂ ಎಷ್ಟು ಮೊತ್ತದ ಹಣ ಜಮಾ ಆಗಲಿದೆ ಎಂಬುದನ್ನು ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದೆ. ಮುಂದಿನ ಒಂದು ವಾರದ ಒಳಗೆ ರಾಜ್ಯದ ರೈತರ ಖಾತೆಗೆ ಬರ ಪರಿಹಾರದ ಮೊದಲ ಕಂತಿನ ಹಣ ಜಮೆ ಮಾಡಲಾಗುತ್ತದೆ ಎಂದು ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಅವರು ತಿಳಿಸಿದ್ದು. ರಿಸರ್ವ್ ಬ್ಯಾಂಕಿಗೆ 12 ಲಕ್ಷ ಜನರಿಗೆ ಹಣ ಪಾವತಿ ಮಾಡಲು ಪೇಮೆಂಟ್ ಆರ್ಡರ್ ಕಳುಹಿಸಿದ್ದೇವೆ ಎಂದು ಸಚಿವರು ತಿಳಿಸಿದರು. ಈ ಬೆಳೆ ಪರಿಹಾರದ ಹಣ ಒಟ್ಟು 25 ರಿಂದ 30 ಲಕ್ಷ ಜನರಿಗೆ ಸಿಗಲಿದೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ.

ಒಂದು ವಾರದಲ್ಲಿ ಹಣ ಜಮಾ ಆಗಲಿದೆ :

ರಾಜ್ಯದ ರೈತರ ಬ್ಯಾಂಕ್ ಖಾತೆಗೆ ಪರ ಪರಿಹಾರದ ಮೊದಲ ಕಂತ್ತಿನ ಹಣ ಒಂದು ವಾರದಲ್ಲಿ ಜಮಾ ಮಾಡಲಾಗುತ್ತದೆ ಎಂದು ರಾಯಚೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ. ಈ ಹಿಂದೆ ಅತಿವೃಷ್ಟಿ ಪರಿಹಾರ ಬರ ಪರಿಹಾರ ನೀಡುವಲ್ಲಿ ಸಾಕಷ್ಟು ದೋಷಗಳಿದ್ದವು ಇದರಿಂದಾಗಿ ಎಷ್ಟೋ ಜನರು ಬೆಳೆಯನ್ನೇ ಬೆಳೆಯದಿದ್ದರೂ ಕೂಡ ಅವರಿಗೆ ಪರಿಹಾರದ ಹಣ ತಲುಪಿದ್ದು ನಿಜವಾಗಿ ಬೆಳೆ ಹಾನಿಯಾದವರಿಗೆ ಸರಿಯಾದ ಹಣ ಸಿಗುತ್ತಿರಲಿಲ್ಲ .

ಈ ಹಿಂದೆ ಇದ್ದ ಸರ್ಕಾರವು ಕೂಡ ಇದೇ ರೀತಿ ಮಾಡಿದ್ದು ಇದರಿಂದಾಗಿ ರೈತರ ಬೆಳೆಗೆ ಬೇರೆ ಪರಿಹಾರದ ಹಣ ಬರುವುದೇ ಬೇರೆಯವರಿಗೆ ಎಂಬ ಮಾಹಿತಿಯು ಕೇಳಿ ಬರುತ್ತಿದ್ದು ಅಧಿಕಾರಿಗಳು ಬೆಳೆ ಮಾಹಿತಿ ಸೇರಿಸುವ ಸಂದರ್ಭದಲ್ಲಿ ತಪ್ಪುಗಳನ್ನು ಮಾಡುತ್ತಿದ್ದರು. ಇವೆಲ್ಲವುಗಳನ್ನು ಸರಿ ಮಾಡಿದ ನಂತರ ಹಣವನ್ನು ಬೆಳೆ ಸಮೀಕ್ಷೆ ಆಧಾರದಲ್ಲಿ ಪಾವತಿ ಮಾಡಲಾಗುತ್ತದೆ ಎಂದು ಸಚಿವರು ವಿವರ ವಾಗಿ ತಿಳಿಸಿದರು.

ಇದನ್ನು ಓದಿ : ಈ ವಿಷಯಗಳನ್ನು ಗೂಗಲ್ ನಲ್ಲಿ ಸರ್ಚ್ ಮಾಡಿದರೆ ಜೈಲು ಸೇರುವುದಂತೂ ಗ್ಯಾರಂಟಿ

ಮೊದಲ ಕಂತು 2,000 ಹಣ ಜಮ :

  • ಬರ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು .
  • ಕೇಂದ್ರ ಸರ್ಕಾರದಿಂದ ಹಣ ಬಂದಿರುವುದಿಲ್ಲ .
  • ರಾಜ್ಯ ಸರ್ಕಾರ ವರಿಗೆ ರೈತರಿಗೆ ಪರಿಹಾರ ನೀಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದು.
  • ಮಾಹಿತಿ ಪ್ರಕಾರ 800 ರಿಂದ 900 ಕೋಟಿ ಮೊದಲ ಕಂತಿನಲ್ಲಿ ಹಣ ಬರಬೇಕಾಗಿದೆ.
  • ಕೇಂದ್ರ ಸರ್ಕಾರದಿಂದ 4663 ಕೋಟಿ ರೂಪಾಯಿ ಪರಿಹಾರದ ಹಣವನ್ನುಕೇಳಲಾಗಿದೆ .
  • ಎಲ್ಲಾ ಪರಿಹಾರದ ಹಣ ಸೇರಿ 18172 ಕೋಟಿ ರೂಪಾಯಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದೇವ.

ಹಣ ಪಡೆಯಲು ಬೇಕಾದ ದಾಖಲೆ :

  1. ರೈತರ FID ಸಂಖ್ಯೆ .
  2. ಆಧಾರ್ ಕಾರ್ಡ್.
  3. ಕಿಸಾನ್ ಕಾರ್ಡ್ .
  4. ವರದಿ ಬೆಳೆ ನಾಶದ ಬಗ್ಗೆ .
  5. ಬ್ಯಾಂಕ್ ಖಾತೆ .
  6. ಮೊಬೈಲ್ ಸಂಖ್ಯೆ .

ಒಟ್ಟರಿಯಾಗಿ ರಾಜ್ಯ ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ ನೀಡಿದ್ದು. ಈ ಬಗ್ಗೆ ನಿಮಗೆ ತಿಳಿದಿರುವ ಎಲ್ಲ ರೈತರಿಗೆ ಶೇರ್ ಮಾಡುವ ಮೂಲಕ ಮುಂದಿನ ವಾರದಲ್ಲಿ ಬರ ಪರಿಹಾರದ ಮೊದಲ ಕಂತಿನ ಹಣ ಬಿಡುಗಡೆಯಾಗಲಿದೆ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment