rtgh

ಮಕ್ಕಳಿಗೆ 75000 ವಿದ್ಯಾರ್ಥಿ ವೇತನ ಸಿಗಲಿದೆ : ವಿದ್ಯಾಭ್ಯಾಸಕ್ಕೆ ಸರ್ಕಾರದಿಂದ ಹಣ !

ನಮಸ್ಕಾರ ಸ್ನೇಹಿತರೆ ಸರ್ಕಾರವು ಕಾರ್ಮಿಕ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಹಾಗೂ ಕಾರ್ಮಿಕರ ಮಕ್ಕಳ ಜೀವನಕ್ಕೆ ಸಹಾಯವಾಗುವ ದೃಷ್ಟಿಯಿಂದ 5000 ಗಳಿಂದ 50,000ಗಳವರೆಗೆ ವಿದ್ಯಾರ್ಥಿವೇತನವನ್ನು ನೀಡಲು ಮುಂದಾಗಿದೆ. ಈ ಯೋಜನೆ ಯು ಕಟ್ಟಡ ಮತ್ತು ಕಾರ್ಮಿಕ ಕಲ್ಯಾಣ ಇಲಾಖೆಯಿಂದ ಜಾರಿಯಾಗಲಿದ್ದು ಕಾರ್ಮಿಕ ಕಾರ್ಡ್ ಅನ್ನು ಕಾರ್ಮಿಕ ಕಲ್ಯಾಣ ಇಲಾಖೆಯಿಂದ ಈಗಾಗಲೇ ಪಡೆದಿರುವ ಕಾರ್ಮಿಕರ ಇಬ್ಬರು ಮಕ್ಕಳಿಗೆ ಸರ್ಕಾರದ ಈ ಸ್ಕಾಲರ್ಶಿಪ್ ಸಿಗಲಿದೆ. ಕಲಿಕಾ ಭಾಗ್ಯ ಯೋಜನೆಯ ಅಡಿಯಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಅಂದರೆ ಮೂರು ವರ್ಷದ ಮಕ್ಕಳಿಂದ ಪಿಎಚ್ಡಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ಯೋಜನೆಯ ಪ್ರಯೋಜನ ನೀಡಲಾಗುತ್ತಿದೆ.

Children will get scholarship
Children will get scholarship

ಕಲಿಕಾ ಭಾಗ್ಯ ಯೋಜನೆಯ ಮೊತ್ತ :

ಕರ್ನಾಟಕ ಸರ್ಕಾರವು ಕಟ್ಟಡ ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕಲಿಕಾ ಭಾಗ್ಯ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದು ವಿದ್ಯಾರ್ಥಿ ವೇತನದ ಮೊತ್ತ ಎಷ್ಟು ಎಂದು ನೋಡುವುದಾದರೆ,
5000 ನರ್ಸರಿ ಓದುತ್ತಿರುವ ಮಕ್ಕಳಿಗೆ ಹಾಗೂ ಒಂದರಿಂದ ನಾಲ್ಕನೇ ತರಗತಿ ಓದುತ್ತಿರುವ ಮಕ್ಕಳಿಗೆ, 8000 5 ರಿಂದ 8ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ, 12,000 9 ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ, ಹದಿನೈದು ಸಾವಿರ ರೂಪಾಯಿ ಪಿಯುಸಿ ಮಕ್ಕಳಿಗೆ, 20,000 ಪಾಲಿಟೆಕ್ನಿಕ್ ಅಥವಾ ಡಿಪ್ಲೋಮೋ ಐಟಿಐ ಓದುತ್ತಿರುವ ವಿದ್ಯಾರ್ಥಿಗಳಿಗೆ, 40,000 ಬಿಎಸ್ಸಿ ನರಸಿಂಘ ಅಥವಾ ಜಿಏನ್ಎಂ ಅಥವಾ ಎಂಎಂ ಅಥವಾ ಪ್ಯಾರಾಮೆಡಿಕಲ್ ಓದುತ್ತಿರುವ ವಿದ್ಯಾರ್ಥಿಗಳಿಗೆ, 25,000 ಡಿಎಡ್ ಓದುತ್ತಿರುವ ವಿದ್ಯಾರ್ಥಿಗಳಿಗೆ, 35,000 ಬಿ ಎಡ್ ಓದುತ್ತಿರುವ ವಿದ್ಯಾರ್ಥಿಗಳಿಗೆ, 25,000

ಯಾವುದೇ ಪದವಿ ಓದುತ್ತಿರುವ ಪ್ರತಿ ವರ್ಷ ವಿದ್ಯಾರ್ಥಿಗಳಿಗೆ, 30,000 ಎಲ್ ಎಲ್ ಬಿ ಅಥವಾ ಎಲ್ ಎಲ್ ಎಮ್ ಓದುತ್ತಿರುವ ವಿದ್ಯಾರ್ಥಿಗಳಿಗೆ, ಐವತ್ತು ಸಾವಿರ ರೂಪಾಯಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ, 35,000 ಮಾಸ್ಟರ್ ಡಿಗ್ರಿ ವಿದ್ಯಾರ್ಥಿಗಳಿಗೆ, ಅರವತ್ತು ಸಾವಿರ ರೂಪಾಯಿ ಎಂಟಿಕ್ ಅಥವಾ ಸಮನಾದ ಉನ್ನತ ಶಿಕ್ಷಣ ಓದುತ್ತಿರುವ ವಿದ್ಯಾರ್ಥಿಗಳಿಗೆ, 75,000 ಎಂಡಿ ಓದುತ್ತಿರುವ ವಿದ್ಯಾರ್ಥಿಗಳಿಗೆ, 25,000 ಪಿ ಎಚ್ ಡಿ ಮಾಡುತ್ತಿರುವ ವಿದ್ಯಾರ್ಥಿಗಳಿಗೆ, 25,000 ಎಂಫಿಲ್ ಓದುತ್ತಿರುವ ವಿದ್ಯಾರ್ಥಿಗಳಿಗೆ ಕಲಿಕಾ ಭಾಗ್ಯ ಯೋಜನೆ ಅಡಿಯಲ್ಲಿ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ.

ಹೀಗೆ ಕರ್ನಾಟಕ ಸರ್ಕಾರವು ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ಕಲಿಕಾ ಭಾಗ್ಯ ಯೋಜನೆ ಅಡಿಯಲ್ಲಿ ಉನ್ನತ ಶಿಕ್ಷಣವನ್ನು ಮುಂದುವರಿಸುವ ಉದ್ದೇಶದಿಂದ ಹಾಗೂ ಮಕ್ಕಳ ಜೀವನಕ್ಕೆ ಸಹಾಯವಾಗುವ ಉದ್ದೇಶದಿಂದ ಈಗಾಗಲೇ ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕ ಕಾರ್ಡ್ ಪಡೆದಿರುವ ಕಾರ್ಮಿಕರ ಇಬ್ಬರು ಮಕ್ಕಳಿಗೆ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದ್ದು ಕಾರ್ಮಿಕರ ಮಕ್ಕಳು ಸಂಪೂರ್ಣವಾಗಿ ಪಡೆಯಬಹುದಾಗಿದೆ. ಹೀಗೆ ಈ ಮಾಹಿತಿಯನ್ನು ಎಲ್ಲ ವಿದ್ಯಾರ್ಥಿಗಳಿಗೆ ಶೇರ್ ಮಾಡಿದ ಮೂಲಕ ಅವರೇನಾದರೂ ಕಾರ್ಮಿಕರ ಮಕ್ಕಳಾಗಿದ್ದರೆ ವಿದ್ಯಾರ್ಥಿವೇತನವನ್ನು ಪಡೆಯಬಹುದು ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು ;

Leave a Comment