rtgh

ಹೋಂ ಗಾರ್ಡ್ ಹುದ್ದೆಗೆ ಅರ್ಜಿ ಆಹ್ವಾನ : 10ನೇ ತರಗತಿ ಪಾಸ್ ಆದವರು ಅರ್ಜಿ ಸಲ್ಲಿಸಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಏನೆಂದರೆ, 10ನೇ ತರಗತಿ ಪಾಸ್ ಆಗಿರುವಂತಹ ಪುರುಷ ಹಾಗೂ ಮಹಿಳೆಯರಿಗೆ ಹೋಂ ಗಾರ್ಡ್ಸ್ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಹತನೇ ತರಗತಿ ಪಾಸಾದ ಯುವಕ ಯುವತಿಯರಿಂದ 59 ಪುರುಷರು ಹಾಗೂ 10 ಮಹಿಳೆಯರಿಂದ ಸೇರಿ ಒಟ್ಟು 69 ಹೋಮ್ ಗಾರ್ಡ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

Application Invitation for the post of Home Guard
Application Invitation for the post of Home Guard

ಹುದ್ದೆಯ ವಿವರಗಳು :

ಗೃಹರಕ್ಷಕ ದಳ ದಾವಣಗೆರೆಯಲ್ಲಿ ಒಟ್ಟು ಖಾಲಿ 69 ಹುದ್ದೆಗಳು ಇದ್ದು ಗೃಹರಕ್ಷಕ ಅಥವಾ ಗೃಹರಕ್ಷಕೆ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಯುವಕ ಯುವತಿಯರು ಆಫ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದ್ದು ಆಯ್ಕೆಯಾದ ಅಭ್ಯರ್ಥಿಗಳಿಗೆ ದಾವಣಗೆರೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

ವಯಸ್ಸಿನ ಮಿತಿ ಹಾಗೂ ವಿದ್ಯಾರ್ಹತೆ :

ಗೃಹರಕ್ಷಕ ದಳದಲ್ಲಿ ಖಾಲಿ ಇರುವ ಗ್ರಹ ರಕ್ಷಕ ಅಥವಾ ಗೃಹರಕ್ಷಕಿ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ 19 ರಿಂದ 45 ವರ್ಷ ವಯಾಮಿತಿಯನ್ನು ನಿಗದಿಪಡಿಸಲಾಗಿದ್ದು 10ನೇ ಪಾಸ್ ಆಗಿರುವ ಅರ್ಹ ಪುರುಷರು ಹಾಗೂ ಮಹಿಳೆಯರು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ರಾಜಕೀಯ ಪಕ್ಷ ಅಥವಾ ಸಂಘದ ಸದಸ್ಯರಾಗಿರಬಾರದು ಹಾಗೂ ಕಾರ್ಯಕರ್ತರು ಆಗಿರಬಾರದು ಜೊತೆಗೆ ಯಾವುದೇ ಪೊಲೀಸ್ ಪ್ರಕರಣದಲ್ಲಿ ಭಾಗಿಯಾಗಿರಬಾರದು.

ಇದನ್ನು ಓದಿ :4.5 ಲಕ್ಷ ಬೆಲೆಬಾಳುವ ಕುರಿ : ಈ ಕುರಿಗೆ ಇಷ್ಟೊಂದು ಹಣ ಏಕೆ? ಇದನ್ನು ಹೇಗೆ ಸಾಕುವುದು ?

ಪೋಸ್ಟಿಂಗ್ ವಿವರ ಮಹಿಳೆಯರಿಗೆ :

ದಾವಣಗೆರೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮಹಿಳೆಯರಿಗೆ ಪೋಸ್ಟಿಂಗ್ ನೀಡಲಾಗುತ್ತಿದ್ದು 10 ದಾವಣಗೆರೆಯಲ್ಲಿ ಮೂರು ಹರಿಹರದಲ್ಲಿ ಏಳು ಮಲೆಬೆನ್ನೂರಿನಲ್ಲಿ ನಾಲ್ಕು ಹೊನ್ನಾಳಿ ತಾಲೂಕಿನಲ್ಲಿ 15 ನ್ಯಾಮತಿ ಮೂರು ಚೆನ್ನ ಗಿರಿಯಲ್ಲಿ ನಾಲ್ಕು ಸಂತೆಬೆನ್ನೂರಿನಲ್ಲಿ 8 ಜಗಳೂರಿನಲ್ಲಿ 11 ಬಿಳಿ ಚೋಡಿನಲ್ಲಿ ನಾಲ್ಕು ಬಸವನಕೋಟೆಯಲ್ಲಿ ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು :

ಗೃಹರಕ್ಷಕ ದಳ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಪಾಸ್ಪೋರ್ಟ್ ವಿದ್ಯಾರ್ಹತೆಯ ಪ್ರಮಾಣ ಪತ್ರ ಜನ್ಮ ದಿನಾಂಕದೃಢೀಕರಣ ಪತ್ರ ವೈದ್ಯಕೀಯ ಪ್ರಮಾಣ ಪತ್ರವನ್ನು ಹೊಂದಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಪ್ರಮುಖ ದಿನಾಂಕಗಳು :

ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಪ್ರಾರಂಭ ದಿನಾಂಕ 09-02-2024 ಆಗಿದ್ದು ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 12-02-2024 ಈ ದಿನಾಂಕದೊಳಗೆ ಗೃಹರಕ್ಷಕ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ :

ಹೋಂ ಗಾರ್ಡ್ ಹುದ್ದೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಬಯಸುತ್ತಿದ್ದರೆ
ಜಿಲ್ಲಾಸಮದೇಶ್ಟರ ಕಚೇರಿ,
ದೇವರಾಜ್ ಅರಸ್ ಬಡಾವಣೆ ಬಿ ಬ್ಲಾಕ್,
ಶಿವ ಪಾರ್ವತಿ ಕಲ್ಯಾಣ ಮಂಟಪ ಪಕ್ಕ, ಶಿವಾಲಯ ಹಿಂಭಾಗ, ದಾವಣಗೆರೆ 577006
ದೂರವಾಣಿ ಸಂಖ್ಯೆ 08192-250784 ಇದಾಗಿದೆ ಈ ಕಚೇರಿಗೆ ಅಥವಾ ದೂರವಾಣಿ ಸಂಖ್ಯೆಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಈ ಹುದ್ದೆಗೆ ಸಂಬಂಧಿಸಿದಂತೆ ತಿಳಿದುಕೊಳ್ಳಬಹುದು.

ಒಟ್ಟಾರೆ ಹೋಮ್ ಗಾರ್ಡ್ ಹುದ್ದೆಗಳು ದಾವಣಗೆರೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಖಾಲಿ ಇದ್ದು ಆಸಕ್ತ ಅಭ್ಯರ್ಥಿಗಳು ಹಾಗೂ ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಿ ಹೋಂ ಗಾರ್ಡ್ ಹುದ್ದೆಯನ್ನು ಪಡೆಯಬಹುದಾಗಿತ್ತು ಈ ಬಗ್ಗೆ ನಿಮ್ಮ ಸ್ನೇಹಿತರು ಯಾರಾದರೂ ಹತನೇ ತರಗತಿಯನ್ನು ಪಾಸಾಗಿದ್ದರೆ ಅವರಿಗೆ ದಾವಣಗೆರೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಹೋಂ ಗಾರ್ಡ್ ಹುದ್ದೆಗಳು ಖಾಲಿ ಇವೆ ಎಂಬುದರ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment