ನಮಸ್ಕಾರ ಸ್ನೇಹಿತರೆ, ಸರ್ಕಾರವು ಹಲವಾರು ಯೋಜನೆಗಳನ್ನು ಹೆಣ್ಣು ಮಕ್ಕಳಿಗಾಗಿಯೇ ಜಾರಿಗೊಳಿಸುತ್ತಿದ್ದು ರಾಜ್ಯದಲ್ಲಿ ಹಲವು ಯೋಜನೆಗಳನ್ನು ಹೆಣ್ಣು ಮಕ್ಕಳ ಅಭಿವೃದ್ಧಿಗೆ ಜಾರಿಗೊಳಿಸುತ್ತಿದೆ ಅಂತಹ ಒಂದು ಯೋಜನೆ ಎಂದರೆ ಅದು ಭಾಗ್ಯಲಕ್ಷ್ಮಿ ಯೋಜನೆ ಯಾಗಿದೆ. ಈ ಯೋಜನೆಯನ್ನು ಹೆಣ್ಣು ಮಗುವಾದ ತಕ್ಷಣ ಮಾಡಿಸಬಹುದಾಗಿತ್ತು 50,000 ಬಾಂಡನ್ನು ಮಗುವಿನ ಜನನದ ಮೇಲೆ ತಂದೆ ತಾಯಿಯರಿಗೆ ನೀಡಲಾಗುತ್ತದೆ. ಅಲ್ಲದೆ ವಿವಿಧ ಹಂತಗಳಲ್ಲಿ ಹೆಣ್ಣು ಮಗುವನ್ನು ಬೆಳೆಸಲು ನೆರವನ್ನು ಸರ್ಕಾರದಿಂದ ಪಡೆಯಬಹುದಾಗಿದೆ.
ಭಾಗ್ಯಲಕ್ಷ್ಮಿ ಯೋಜನೆ :
ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಭಾಗ್ಯಲಕ್ಷ್ಮಿ ಯೋಜನೆಯ ಹೆಣ್ಣು ಮಕ್ಕಳಿಗೆ ವಿವಿಧ ಹಂತಗಳಲ್ಲಿ ಆರ್ಥಿಕ ನೆರವನ್ನು ನೀಡುವುದಲ್ಲದೆ ಕೊಲೆಗಳ ಅಥವಾ ಹತ್ಯೆಗಳನ್ನು ತಡೆಯಲು ಜೊತೆಗೆ ಹೆಣ್ಣು ಮಕ್ಕಳನ್ನು ಚೆನ್ನಾಗಿ ಬೆಳೆಸಲು ಈ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಐವತ್ತು ಸಾವಿರ ರೂಪಾಯಿಯ ಬಾಂಡನ್ನು ಹೆಣ್ಣು ಮಗು ಜನನದ ನಂತರ ನೀಡಲಾಗುತ್ತದೆ.
ಪ್ರತಿ ಹೆಣ್ಣು ಮಗುವಿಗೆ 21 ವರ್ಷ ಪೂರೈಸಿದ ನಂತರ ಎರಡು ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ ಇದರಿಂದ ಹೆಣ್ಣು ಮಕ್ಕಳು ವಿವಿಧ ಹಂತದಲ್ಲಿ ಭಾಗ್ಯಲಕ್ಷ್ಮಿ ಯೋಜನೆಯ ಸೌಲಭ್ಯವನ್ನು ಪಡೆಯಲು ಸುಲಭವಾಗುತ್ತದೆ. 3000 ಬಯಗಳನ್ನು ಆರನೇ ತರಗತಿಯ ಮಗುವಿಗೆ 5000ಗಳನ್ನು ಎಂಟನೇ ತರಗತಿಯ ಮಗುವಿಗೆ 7,000 10ನೇ ತರಗತಿಯ ಮಗುವಿಗೆ 8000 ಹನ್ನೆರಡನೇ ತರಗತಿಯ ಮಗುವಿಗೆ ಹೀಗೆ ಮಕ್ಕಳ ಶಿಕ್ಷಣಕ್ಕಾಗಿಯೂ ಸಹ ಆರ್ಥಿಕ ನೆರವು ನೀಡುತ್ತಿದ್ದು ಶಿಕ್ಷಣಕ್ಕಾಗಿ ಮಕ್ಕಳು ಒಟ್ಟು 23,000ಗಳನ್ನು ಪಡೆಯಬಹುದಾಗಿದೆ.
ಇದನ್ನು ಓದಿ : ಬೀದಿ ಬದಿ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರ 50,000 ದ ವರೆಗೆ ಹಣ ಸೌಲಭ್ಯ ನೀಡುತ್ತಿದೆ
ಯಾರೆಲ್ಲ ಅರ್ಜಿ ಸಲ್ಲಿಸಬಹುದು :
ಚೆನ್ನಾಗಿ ಓದಿ ಹೆಣ್ಣು ಮಕ್ಕಳು ಅಭಿವೃದ್ಧಿ ಹೊಂದಬೇಕು ಹಾಗೂ ಗುಣಮಟ್ಟದ ಶಿಕ್ಷಣವನ್ನು ಹೆಣ್ಣು ಮಗು ಪಡೆಯಬೇಕು ಜೊತೆಗೆ ಪೋಷಕರಿಗೆ ಹೆಣ್ಣು ಮಗು ಹೊರೆಯಾಗಬಾರದು ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ.
21 ವರ್ಷದ ನಂತರ ಹೆಣ್ಣು ಮಗು ವಿಗೆ ಈ ಭಾಂದವ್ಯ ಹೆಚ್ಚಾಗುತ್ತದೆ. ಈ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ಭಾರತದ ನಾಗರೀಕರಾಗಿರಬೇಕು ಕುಟುಂಬದ ವಾರ್ಷಿಕ ಆದಾಯವು 2 ಲಕ್ಷಕ್ಕಿಂತ ಕಡಿಮೆ ಇರಬೇಕು. 18 ವರ್ಷ ತುಂಬುವ ಮೊದಲು ಹೆಣ್ಣು ಮಗುವಿಗೆ ಮದುವೆ ಮಾಡಬಾರದು. ಅಂಗನವಾಡಿ ಕೇಂದ್ರಕ್ಕೆ ಬಂದು ಹೆಣ್ಣು ಮಗು ಜನಿಸಿದರೆ ನೋಂದಣಿ ಮಾಡಿಸಿಕೊಳ್ಳಬೇಕು 2006 ಮಾರ್ಚ್ 31ರ ನಂತರ ಜನಿಸಿದ ರಾಜ್ಯದ ಎಲ್ಲಾ ಮಕ್ಕಳು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.
ಭಾಗ್ಯಲಕ್ಷ್ಮಿ ಯೋಜನೆಗೆ ದಾಖಲೆಗಳು :
ಭಾಗ್ಯಲಕ್ಷ್ಮಿ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ಮಗುವಿನ ಪೋಷಕರ ಆಧಾರ್ ಕಾರ್ಡ್ ಹೊಂದಿರಬೇಕು ವಿಳಾಸ ಪುರಾವೆ ಇರುವಂತಹ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ತಂದೆ ಹಾಗೂ ತಾಯಿಯ ಪಾಸ್ಪೋರ್ಟ್ ಸೈಜ್ ಫೋಟೋ ಮಗು ಜನಿಸಿರುವ ಜನನ ಪ್ರಮಾಣ ಪತ್ರ ಮೊಬೈಲ್ ನಂಬರ್ ಬ್ಯಾಂಕ್ ಪಾಸ್ ಬುಕ್ ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು.
ಒಟ್ಟಾರೆ ಹೆಣ್ಣು ಮಗುವಿಗಾಗಿ ಭಾಗ್ಯಲಕ್ಷ್ಮಿ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದ್ದು ಈ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಎಲ್ಲ ತಂದೆ ತಾಯಿಗಳು ಪಡೆಯಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.