rtgh

ಕಾಂಗ್ರೆಸ್ ಗೃಹಜೋತಿಯ ಬೆನ್ನಲ್ಲೇ ಕೇಂದ್ರದಿಂದ ಬಹುದೊಡ್ಡ ಘೋಷಣೆ

ನಮಸ್ಕಾರ ಸ್ನೇಹಿತರೇ ಕರ್ನಾಟಕ ಸರ್ಕಾರದಲ್ಲಿ ಬಿಡುಗಡೆ ಮಾಡಲಾದ ಗೃಹ ಜ್ಯೋತಿ ಯೋಜನೆಗೆ ಟಕ್ಕರ್ ನೀಡಲು ಕೇಂದ್ರ ಸರ್ಕಾರವು ಒಂದು ಹೊಸ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದೆ ಈ ಯೋಜನೆಯ ಅಡಿಯಲ್ಲಿ 300 ಯೂನಿಟ್ ಉಚಿತ ವಿದ್ಯುತ್ತನ್ನು ಪ್ರತಿ ತಿಂಗಳು ಕೇಂದ್ರ ಸರ್ಕಾರದಿಂದ ನೀಡಲಾಗುತ್ತದೆ. ಹಾಗಾದರೆ ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

Central Government Guarantee Scheme
Central Government Guarantee Scheme

ಸತತ ಆರನೇ ಬಾರಿ ಬಜೆಟ್ ಮಂಡನೆ :

ನಿರ್ಮಲ ಸೀತಾರಾಮನ್ ರವರು ಸತತ ಆರನೇ ಬಾರಿ ಬಜೆಟ್ ಘೋಷಣೆ ಮಾಡಿದ್ದು ಲೋಕಸಭಾ ಚುನಾವಣೆಯ ನಂತರ ಈ ಮಧ್ಯಂತರ ಬಜೆಟ್ ಹೊಸ ಸರ್ಕಾರ ರಚನೆಯಾಗುವವರೆಗೂ ಹಣಕಾಸಿನ ಅಗತ್ಯತೆಗಳನ್ನು ನೋಡಿಕೊಳ್ಳಲು ನೆರವಾಗುತ್ತದೆ. ಕೇಂದ್ರ ಸರ್ಕಾರ ಸಾಕಷ್ಟು ಬದಲಾವಣೆಗಳನ್ನು ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ತರಲು ನಿರ್ಧರಿಸಿದೆ.

ಮಧ್ಯಂತರ ಬಜೆಟ್ ನಲ್ಲಿ ಉಚಿತ ಗ್ಯಾರಂಟಿ ಯೋಜನೆಗಳು :

ಕಾಂಗ್ರೆಸ್ ಸರ್ಕಾರವು ಈ ಹಿಂದೆ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಉಚಿತ ಗ್ಯಾರಂಟಿ ಯೋಜನೆಗಳನ್ನು ಘೋಷಿಸುವ ಮೂಲಕ ಅಧಿಕಾರವನ್ನು ಪಡೆದುಕೊಂಡಿರುವುದನ್ನು ಗಮನಿಸಿದಂತಹ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ರಾಜ್ಯದ ಜನತೆಗೆ ಉಚಿತ ಯೋಜನೆಗಳನ್ನು ಘೋಷಣೆ ಮಾಡಿದೆ. ಈ ಬಾರಿಯ ಬಜೆಟ್ ನಲ್ಲಿ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಂತಹ ಗೃಹಜೋತಿ ಯೋಜನೆಗೆ ಟಕ್ಕರ್ ನೀಡುವಂತಹ ಯೋಜನೆಯನ್ನು ತನ್ನ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಘೋಷಿಸಿದೆ.

ಕೇಂದ್ರ ಸರ್ಕಾರದಿಂದ ಹೊಸ ಪ್ಲಾನ್ :

ಕಾಂಗ್ರೆಸ್ ಸರ್ಕಾರವು ಗೃಹ ಜ್ಯೋತಿ ಯೋಜನೆಗೆ ಟಕ್ಕರ್ ನೀಡುವಂತಹ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರ ಪಡೆಯಲು ಉಚಿತ ವಿದ್ಯುತ್ ನೀಡಲು ಗೃಹಜೋತಿ ಯೋಜನೆಯನ್ನು ಜಾರಿಗೆ ತಂದಿತು. ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಮಾತ್ರವಲ್ಲದೆ ತೆಲಂಗಾಣದಲ್ಲಿಯೂ ಕೂಡ ಉಚಿತ ಗ್ಯಾರಂಟಿ ಯೋಜನೆಗಳ ಮೂಲಕ ತಮ್ಮ ಅಧಿಕಾರವನ್ನು ಪಡೆದುಕೊಂಡಿದೆ ಇದೀಗ ತನ್ನ ಬಜೆಟ್ ನಲ್ಲಿ ಉಚಿತ ಗ್ಯಾರಂಟಿಯನ್ನು ಕೇಂದ್ರ ಸರ್ಕಾರ ಅಸ್ತ್ರವಾಗಿಸಿಕೊಂಡು ರಾಜ್ಯ ಸರ್ಕಾರದ ಉಚಿತ ವಿದ್ಯುತ್ ಯೋಜನೆಗೆ ಹೊಸದೊಂದು ಪ್ಲಾನ್ ಅನ್ನು ಪೋಷಿಸಿದೆ.

ಇದನ್ನು ಓದಿ :ಸರ್ಕಾರದಿಂದ ಮನೆ ಮೇಲೆ ಸೋಲಾರ್ ಪ್ಯಾನಲ್ ಹಾಕಲು ಸಬ್ಸಿಡಿ ಎಷ್ಟು ಸಿಗಲಿದೆ ತಿಳಿದಿದೆಯಾ ?

ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ :

ಕೇಂದ್ರ ಸರ್ಕಾರ ಫೆಬ್ರವರಿ ಒಂದು 2024 ರಂದು ಮಧ್ಯಂತರ ಬಜೆಟ್ ಅನ್ನು ಘೋಷಣೆ ಮಾಡಿದ್ದು ಈ ಬಜೆಟ್ ನಲ್ಲಿ ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ತನ್ನು ಒಂದು ಕೋಟಿ ಮನೆಗಳಿಗೆ ನೀಡುವುದಾಗಿ ಘೋಷಣೆ ಮಾಡಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಈ ಉಚಿತ ವಿದ್ಯುತ್ ಘೋಷಣೆಯ ಮೂಲಕ ಲೋಕಸಭಾ ಚುನಾವಣೆಯಲ್ಲಿ ಜಯ ಸಾಧಿಸಲು ಬಿಜೆಪಿ ಸರ್ಕಾರ ಈ ಯೋಜನೆ ಒಂದನ್ನು ಪ್ಲಾನ್ ಮಾಡಿದೆ.

ಮುಂದಿನ ಐದು ವರ್ಷಗಳಲ್ಲಿ ಎರಡು ಕೋಟಿ ಬಡವರಿಗೆ ಇನ್ನು ಈ ಉಚಿತ ವಿದ್ಯುತ್ ನ ಜೊತೆಗೆ ಮನೆ ನಿರ್ಮಿಸಿ ಕೊಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ರವರು ತಮ್ಮ ಬಜೆಟ್ ಘೋಷಣೆಯಲ್ಲಿ ತಿಳಿಸಿದ್ದಾರೆ.

ಒಟ್ಟಾರೆ ಕೇಂದ್ರ ಸರ್ಕಾರವು 2024ರ ಲೋಕಸಭಾ ಚುನಾವಣೆಯ ಅಂಗವಾಗಿ ರಾಜ್ಯದ ಜನತೆಗೆ ಉಚಿತ ಗ್ಯಾರಂಟಿ ಯೋಜನೆಗಳನ್ನು ನೀಡಲು ಮುಂದಾಗಿದ್ದು 300 ಯೂನಿಟ್ ಉಚಿತ ವಿದ್ಯುತ್ ಅನ್ನು ಕೇಂದ್ರ ಸರ್ಕಾರದಿಂದ ರಾಜ್ಯದ ಜನತೆ ಪಡೆಯಲಿದ್ದಾರೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಕೇಂದ್ರ ಸರ್ಕಾರದಿಂದಲೂ ಕೂಡ ಉಚಿತ ಯೋಜನೆಗಳು ಜಾರಿಗೆ ಬಂದವು ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment