rtgh

ಉಚಿತ ಕರೆಂಟ್ ಬಳಕೆ ಮಾಡುವವರಿಗೆ ಮತ್ತೊಂದು ಸಿಹಿ ಸುದ್ದಿ

ನಮಸ್ಕಾರ ಸ್ನೇಹಿತರೆ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಸರ್ಕಾರ ನಡೆಸುತ್ತಿದ್ದು ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷವು ನೀಡಿದಂತಹ ಮಾತಿನಂತೆ ಚುನಾವಣೆಯ ನಂತರ ಅಧಿಕಾರಕ್ಕೆ ಬಂದ ನಂತರ ರಾಜ್ಯ ಸರ್ಕಾರವ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ.

Free current usage is another sweet news
Free current usage is another sweet news

ರಾಜ್ಯದೊಳಗೆ ಮಹಿಳೆಯರು ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸಲು ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 2000 ಮನೆಯ ಯಜಮಾನಿಗೆ 5 ಕೆಜಿ ಅಕ್ಕಿ ನೀಡುವಂತಹ ಅನ್ನಭಾಗ್ಯ ಯೋಜನೆ, ಪ್ರತಿ ತಿಂಗಳು ಭತ್ಯೆ ನೀಡುವ ನಿರುದ್ಯೋಗಿ ಯುವಕರಿಗೆ ಯುವನಿಧಿ ಯೋಜನೆ ಹಾಗೂ ಪ್ರತಿ ತಿಂಗಳು ಪ್ರತಿಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವಂತಹ ಬೃಹತಿ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ.

ಗೃಹ ಜ್ಯೋತಿ ಯೋಜನೆ :

ಕಲಬುರ್ಗಿಯಲ್ಲಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಈ ಗ್ರಹ ಜ್ಯೋತಿ ಯೋಜನೆಯನ್ನು ಉದ್ಘಾಟಿಸಿದರು. ಪ್ರತಿಯೊಬ್ಬರ ಮನೆಗೂ 200 ಯೂನಿಟ್ ವರೆಗೆ ಬಳಸುವಂತಹ ವಿದ್ಯುತ್ ಬಿಲ್ಲನ್ನು ಈ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಸರ್ಕಾರವೇ ಪಾವತಿಸುತ್ತದೆ ರಾಜ್ಯದ ಕೋಟ್ಯಂತರ ಜನರು ಈ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ.

ಇದನ್ನು ಓದಿ : ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿ : ಯಾವುದೇ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು

ಮತ್ತೊಂದು ಹೊಸ ಕೊಡುಗೆ :

ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ ರಾಜ್ಯ ಸರ್ಕಾರವು ಇದೀಗ ಮತ್ತಷ್ಟು ವಿದ್ಯುತ್ ಉಚಿತವಾಗಿ ನೀಡಲು ನಿರ್ಧರಿಸಿದ್ದು ವಾರ್ಷಿಕ ಯೂನಿಟ್ ಲೆಕ್ಕ ಹಾಕಿ ಗೃಹಜೋತಿ ಯೋಜನೆಯ ಅಡಿಯಲ್ಲಿ ಅದರ ಪ್ರಕಾರ ವಿದ್ಯುತ್ ಬಳಕೆ ಎಷ್ಟು ಮಾಡಬಹುದು ಎಂದು ತಿಳಿಸಲಾಗುತ್ತದೆ. ನಿಗದಿತ ಬಳಕೆ ಗಿಂತಲೂ ಕಡಿಮೆ ವಿದ್ಯುತ್ ಬಳಕೆ ಮಾಡುತ್ತಿರುವವರಿಗೆ ಇದೀಗ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ನೀಡಲಾಗುತ್ತಿದ್ದು 48 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವವರಿಗೆ 10 ಯೂನಿಟ್ ಹೆಚ್ಚುರಿಯಾಗಿ ಉಚಿತ ವಿದ್ಯುತ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

ಇನ್ನು ಮುಂದೆ ಯಾವುದೇ ರೀತಿಯ ಬಿಲ್ಪಾವತಿ ಮಾಡುವಂತಹ ಅಗತ್ಯ 58 ಯೂನಿಟ್ ಒಳಗೆ ಬಳಕೆ ಮಾಡಿದರು ಅವರಿಗೆ ಸಾಧ್ಯವಿರುವುದಿಲ್ಲ. ರಾಜ್ಯ ಸರ್ಕಾರವೇ ಈ ವಿದ್ಯುತ್ ಬಿಲ್ಲನ್ನು ಪರಿಸಲಿದ್ದು ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಟ್ವೀಟ್ ಮಾಡಿದ್ದಾರೆ.

ಒಟ್ಟಾರೆ ರಾಜ್ಯ ಸರ್ಕಾರವು 48 ಯುನಿಟ್ ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವವರಿಗೆ ಇದೀಗ 10 ಯೂನಿಟ್ ಹೆಚ್ಚುರಿಯಾಗಿ ಉಚಿತ ವಿದ್ಯುತ್ ನೀಡಲು ಮುಂದಾಗಿದ್ದು ನಿಮ್ಮ ಸ್ನೇಹಿತರು ಯಾರಾದರೂ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಾಗಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಇನ್ನು ಮುಂದೆ 10 ಯೂನಿಟ್ ಉಚಿತ ವಿದ್ಯುತ್ ಲಭ್ಯವಿದೆ ಎಂಬುದರ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment