rtgh

ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ : ಎಷ್ಟು ಹಣ! ಸಿಗುತ್ತೆ ಹೇಗೆ ಪಡೆದುಕೊಳ್ಳುವುದು ನೋಡಿ

ನಮಸ್ಕಾರ ಸ್ನೇಹಿತರೆ ಮಹಿಳೆಯರಿಗಾಗಿ ಸರ್ಕಾರವು ಮಹಿಳಾ ಸನ್ಮಾನ ಎಂಬ ಒಂದು ಉಳಿತಾಯ ಯೋಜನೆಯನ್ನು ಜಾರಿಗೆ ತಂದಿದ್ದು ಇದೊಂದು ವಿಶೇಷ ಯೋಜನೆಯಾಗಿದೆ. ಉತ್ತಮ ಬಡ್ಡಿಯನ್ನು ಮಹಿಳೆಯರಿಗೆ ನೀಡುವ ಠೇವಣಿ ಯೋಜನೆ ಇದಾಗಿದ್ದು ಎರಡು ವರ್ಷಗಳವರೆಗೆ ಈ ಯೋಜನೆಯಲ್ಲಿ ಹಣವನ್ನು ಠೇವಣಿ ಮಾಡಬೇಕಾಗುತ್ತದೆ. ಬಡ್ಡಿ ಮತ್ತು ಅಸಲು ಜೊತೆಗೆ ಎರಡು ವರ್ಷಗಳ ನಂತರ ಸಂಪೂರ್ಣ ಮೊತ್ತವನ್ನು ಮಹಿಳೆಯರು ಮರಳಿ ಪಡೆಯಬಹುದಾಗಿದೆ.

Mahila Samman Savings Scheme
Mahila Samman Savings Scheme

ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ :

ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಯು ಮಹಿಳೆಯರಿಗಾಗಿಯೇ ಜಾರಿಗೆ ತಂದಿರುವ ಒಂದು ವಿಶಿಷ್ಟ ಯೋಜನೆಯಾಗಿದ್ದು ಉತ್ತಮ ಬಡ್ಡಿಯನ್ನು ಮಹಿಳೆಯರು ಈ ಯೋಜನೆಯಲ್ಲಿ ಪಡೆಯಬಹುದಾಗಿದೆ ಈ ಯೋಜನೆಯಲ್ಲಿ ಎರಡು ವರ್ಷಗಳವರೆಗೆ ಹೂಡಿಕೆ ಮಾಡಬಹುದಾಗಿದ್ದು ಶೇಕಡ 7.5 ರಷ್ಟು ಬಡ್ಡಿಯನ್ನು ಈ ಯೋಜನೆಗೆ ವಿಧಿಸಲಾಗಿದೆ. ಈ ಯೋಜನೆಯಲ್ಲಿ ಐವತ್ತು ಸಾವಿರದಿಂದ ಎರಡು ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದಾಗಿದ್ದು ಇದೊಂದು ಸರ್ಕಾರಿ ಯೋಜನೆಯಾಗಿದೆ.

ಇದನ್ನು ಓದಿ : ಫೆಬ್ರವರಿ ಅರ್ಧ ತಿಂಗಳು ಬ್ಯಾಂಕ್ ಬಂದ್ : ಇಲ್ಲಿದೆ ಸಂಪೂರ್ಣ ಮಾಹಿತಿ ನೋಡಿ !

ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ ಖಾತೆ ತೆರೆಯುವ ವಿಧಾನ :

ತನ್ನ ಖಾತೆಯನ್ನು ಅಂಚೆ ಕಚೇರಿಯ ಅಥವಾ ಅಧಿಕೃತ ಬ್ಯಾಂಕುಗಳಲ್ಲಿ ಯಾವುದೇ ಮಹಿಳೆಯು ತೆರೆಯಬಹುದಾಗಿದ್ದು ಈ ಖಾತೆಯನ್ನು ತೆರೆಯಬಹುದಾಗಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರಿಗೆ ಈ ಖಾತೆಯನ್ನು ಅವರ ಪೋಷಕರು ತೆರೆಯಬಹುದಾಗಿದೆ ಈ ಖಾತೆಯನ್ನು ತೆರೆಯುವ ಸಂದರ್ಭದಲ್ಲಿ ಮಹಿಳೆಯರು ಫಾರಂ ವನ್ ಅರ್ಜಿ ಭರ್ತಿ ಮಾಡಬೇಕಾಗುತ್ತದೆ. 2025 ರವರೆಗೆ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದ್ದು ಈ ಖಾತೆಯನ್ನು ತೆರೆಯಲು ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಮತ್ತು ಫೋಟೋ ಮುಂತಾದ ಕೆವೈಸಿ ದಾಖಲೆಗಳನ್ನು ಹೊಂದಿರಬೇಕು.

ಖಾತೆಯಿಂದ ಹಣವನ್ನು ಹಿಂಪಡೆಯಲು ಇರುವ ನಿಯಮಗಳು :

ಈ ಖಾತೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಮೆಚುರಿಟಿಯ ಅವಧಿಯ ಮೊದಲು ಹಣವನ್ನು ಖಾತೆಯಿಂದ ಹಿಂಬಡೆಯಲು ಬಯಸುತ್ತಿದ್ದರೆ ಈ ಸೌಲಭ್ಯವನ್ನು ಒಂದು ವರ್ಷದ ನಂತರ ಪಡೆಯಬಹುದಾಗಿದೆ. ಒಂದು ವೇಳೆ ನಿಮಗೆ ಮಧ್ಯದಲ್ಲಿ ಹಣದ ಅಗತ್ಯವಿದ್ದರೆ ಒಂದು ವರ್ಷ ಪೂರ್ಣಗೊಂಡ ನಂತರ 40 ಪ್ರತಿಶತದ ವರೆಗೆ ಠೇವಣಿ ಮಾಡಿದ ಹಣವನ್ನು ಹಿಂಪಡೆಯಬಹುದು.

ತೀವ್ರ ಅನಾರೋಗ್ಯಕ್ಕೆ ಕಾತೆದಾರರು ಒಳಗಾಗಿದ್ದರೆ ಅಥವಾ ಮರಣವನ್ನು ಹೊಂದಿದ್ದರೆ ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಯೋಜನೆ ಖಾತೆಯನ್ನು ಖಾತೆಯನ್ನು ತೆರೆದ ಆರು ತಿಂಗಳ ನಂತರ ಮುಚ್ಚಬಹುದು. ಶೇಕಡ ಎರಡರಷ್ಟು ಬಡ್ಡಿ ದರವನ್ನು ಕಡಿಮೆ ಮಾಡುವ ಮೂಲಕ ಹಣವನ್ನು ಹಿಂತಿರುಗಿಸಲಾಗುತ್ತದೆ.

ಒಟ್ಟಿನಲ್ಲಿ ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ಪೋಸ್ಟ್ ಆಫೀಸ್ನಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಎಲ್ಲ ಮಹಿಳೆಯರಿಗೆ ಶೇರ್ ಮಾಡುವ ಮೂಲಕ ಪೋಸ್ಟ್ ಆಫೀಸ್ನಲ್ಲಿ ಖಾತೆಯನ್ನು ತಿಳಿಯುವಂತೆ ಮಾಡಿದ ಧನ್ಯವಾದಗಳು.

ಇತರೆ ವಿಷಯಗಳು :

Leave a Comment