ನಮಸ್ಕಾರ ಸ್ನೇಹಿತರೆ ಒಬ್ಬರಿಗೆ ಸರಿಯಾದ ಬೆಲೆ ಇಲ್ಲದ ಕೆಲವು ದಿನಗಳಿಂದ ತೊಂದರೆಗೊಳಗಾಗಿರುವ ಕೊಬ್ಬರಿ ಬೆಳೆಗಾರರ ಮುಖದಲ್ಲಿ ಇದೀಗ ಮಂದಹಾಸ ನೀಡಿದೆ. ಅದರಂತೆ ಕನಿಷ್ಠ ಬೆಂಬಲ ಬೆಲೆ 12,000ಗಳೊಂದಿಗೆ ಕೇಂದ್ರ ಸರ್ಕಾರದ ಹಾಗೂ 1500 ರೂಪಾಯಿಗಳನ್ನು ರಾಜ್ಯ ಸರ್ಕಾರ ಕೊಬ್ಬರಿ ಬೆಳೆಗಾರರಿಗೆ ಹೆಚ್ಚುವರಿಯಾಗಿ ನೀಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಹಿತಿ ನೀಡಿದ್ದಾರೆ.
ಕೊಬ್ಬರಿ ಬೆಳೆಗಾರರಿಗೆ ಬೆಂಬಲ ಬೆಲೆ :
ರಾಜ್ಯ ಸರ್ಕಾರ ಪ್ರತಿಕ್ವಿಂಟರ್ ಒಬ್ಬರಿಗೆ ಹೆಚ್ಚುವರಿ ಯಾಗಿ ೧೫೦೦ ರೂಪಾಯಿಗಳನ್ನು ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತುಮಕೂರಿನ ಸಿದ್ದಗಂಗಾ ಮಠದ ಮಾತನಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕುಣಿಗಲ್ನಲ್ಲಿ ಸ್ಟಡ್ ಫಾರ್ಮ್ ನ ಟೌನ್ಶೀಪ್ ಮಾಡುವ ವಿಚಾರವಾಗಿ ಮಾತನಾಡಿದ್ದು ಕುಣಿಗಲ್ಗೆ ರೇಸ್ ಕೋರ್ಸ್ ಶಿಫ್ಟ್ ಮಾಡಲು ಸಲಹೆ ನೀಡಿದ್ದೇನೆ ಎಂದು ತಿಳಿಸಿದರು.
ಪ್ರತಿ ಕ್ವಿಂಟಲ್ ಕೊಬ್ಬರಿಗೆ ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆಯನ್ನು 300 ಗಳಷ್ಟು ಹೆಚ್ಚಿಸಲು ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಆದೇಶ ನೀಡಲಾಗಿತ್ತು ಅಲ್ಲದೆ 250ಗಳಿಗೆ ಉಂಡೆ ಕೊಬ್ಬರಿಯನ್ನು ಹೆಚ್ಚಿಸಿತ್ತು. ಆ ಮೂಲಕ ಕೇಂದ್ರ ಸರ್ಕಾರವು ಬೆಲೆ ಇಳಿಕೆಯಿಂದ ಸಂಕಷ್ಟಕ್ಕೆ ಸಿಲುಕಿರುವ ತೆಂಗು ಬೆಳೆಗಾರರಿಗೆ ಆರ್ಥಿಕ ನೆರವು ನೀಡಿದೆ ಎಂದು ಹೇಳಬಹುದು.
ಇದನ್ನು ಓದಿ : ಬಿಗ್ ಬಾಸ್ ವಿನ್ನರ್ ಹೆಸರು ರಿವಿಲ್ : ಮತ್ತೆ ಪುರುಷ ಸ್ಪರ್ಧಿ ಟ್ರೋಫಿ ಪಡೆಯುತ್ತಾರೆ
ಹೆಚ್ಡಿ ಕುಮಾರಸ್ವಾಮಿ ಕ್ರೆಡಿಟ್ ಪಡೆದ ಬೆಲೆ :
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಸೇರಿದಂತೆ ಇತ್ತೀಚಿಗೆ ಇತರೆ ಜೆಡಿಎಸ್ ನಾಯಕರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ಆ ಸಂದರ್ಭದಲ್ಲಿ ಕೊಬ್ಬರಿ ಬೆಳೆಗಾರರಿಗೆ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಮನವಿ ಮಾಡಿದ್ದರು ಅದಾದ ನಂತರ ಕೇಂದ್ರ ಸರ್ಕಾರವು ಸಹ ಬೆಂಬಲ ಬೆಲೆಯನ್ನು ಕೂಡ ಘೋಷಣೆ ಮಾಡಿತ್ತು. ಇದಕ್ಕೆಲ್ಲ ಕಾರಣ ನಮ್ಮದೇ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ತಿಳಿಸಿದ್ದು ಅದರ ಬೆನ್ನಲ್ಲೇ ರೈತರ ಮುಖದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಂಬಲ ಬೆಲೆ ಘೋಷಣೆ ಮಾಡಿದ್ದು ನಗು ಮೂಡಿಸಿದ್ದಾರೆ.
ಹೀಗೆ ಕರ್ನಾಟಕ ಸರ್ಕಾರವು ಬೆಂಬಲ ಬೆಲೆಯನ್ನು ಕೊಬ್ಬರಿ ಬೆಳೆಗಾರರಿಗೆ ಘೋಷಣೆ ಮಾಡುವುದರ ಮೂಲಕ ರೈತರ ಮುಖದಲ್ಲಿ ಸಂತೋಷ ಮೂಡಿಸಿದ್ದು ಕೇಂದ್ರ ಸರ್ಕಾರದಿಂದಲೂ ಕೂಡ ಕೊಬ್ಬರಿ ಬೆಲೆ ಬೆಂಬಲ ಬೆಲೆ ದೊರೆತಿರುವುದು ಸಂತಸದ ಸುದ್ದಿಯಾಗಿದೆ. ಹಾಗಾಗಿ ಈ ಮಾಹಿತಿಯನ್ನು ಕೊಬ್ಬರಿ ಬೆಳೆಗಾರರಿಗೆ ಶೇರ್ ಮಾಡುವ ಮೂಲಕ ಬೆಂಬಲ ಬೆಲೆ ಸೂಚಿಸಲಾಗಿದೆ ಎಂಬುದನ್ನು ತಿಳಿಸಿ. ಧನ್ಯವಾದಗಳು.